
12th July 2025
ಬೈಲಹೊಂಗಲ- ಕಾರ್ಗಿಲ್ ಯುದ್ದದಲ್ಲಿ ಮಡಿದ ಯೋಧರಿಗೆ ಗೌರವ ಕೊಡುವದು ಪ್ರತಿಯೊಬ್ಬರ ಕರ್ತವ್ಯ ಎಂದು ನಿವೃತ್ತ ಪಿ.ಎಸ್.ಐ ವಾಯ್.ಎಲ್ . ಶೀಗಿಹಳ್ಳಿ ಹೇಳಿದರು.
ತಾಲೂಕಿನ ಮೇಕಲಮರಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ 26 ನೇ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಹುತಾತ್ಮ ಯೋಧ ದಿ. ಯಶವಂತ ಕೋಲಕಾರ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಕಾರ್ಗಿಲ್ ವಿಜಯೋತ್ಸವದಂಗವಾಗಿ ಭಾರತೀಯ ಸೈನಿಕರು ಗೌರವ ಸಮರ್ಪಣೆ ಕಾರ್ಯಕ್ರಮ ಆಯೋಜಿಸಿರುವದು ವಿಶೇಷವಾಗಿದೆ.ಇಂದಿನಯುವ ಪೀಳಿಗೆ ಮಹಾತ್ಮರಿಗೆ, ದೊಡ್ಡವರಿಗೆ, ಹಿರಿಯರಿಗೆ ಗೌರವ ಕೊಡುವದನ್ನು ಕಲಿಯಬೇಕೆಂದರು.
ನೇಸರಗಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೋಮಣ್ಣವರ ಮಾತನಾಡಿ, ಪ್ರತಿವರ್ಷ ಕಾರ್ಗಿಲ್ ಹುತಾತ್ಮ ಯೋಧ ದಿ.ಯಶವಂತ ಕೊಲಕಾರ ಅವರ ಗೌತವಾರ್ಥ ಕಾರ್ಯಕ್ರಮ ಮಾಡುತ್ತಿರುವದು ಉತ್ತಮ ಕಾರ್ಯವಾಗಿದೆ ಎಂದರು.
ಹುತಾತ್ಮ ಹೋಧರ ಪತ್ನಿ ಶ್ರೀಮತಿ ಸಾವಿತ್ರಿದೇವಿ ಯಶವಂತ ಕೋಲಕಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನೇಸರಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಿಂಗಪ್ಪ ಅರಿಕೇರಿ, ಗ್ರಾ. ಪಂ ಅಧ್ಯಕ್ಷೆ ಶ್ರೀಮತಿ ಭಾರತಿ ತಿಗಡಿ, ಉಪಾಧ್ಯಕ್ಷ ಕಾಶಿಮ್ ಜಮಾದಾರ, ಮಂಜುನಾಥ ಹುಲಮನಿ, ಬಾಬು ಹೊಸಮನಿ,ಮಹಾಂತೇಶ ಹಿರೇಮಠ,
ಹೈದರಾಬಾದ ರಿಜಿಮೆಂಟಿನ ಸೇನೆಯ ಅಧಿಕಾರಿಗಳಾದ ನಾಯಕ ಸುಬೇದಾರ ತಿಲಕ್ ಸಿ.ಎಲ್, ಆರ್. ಎಚ್.ಎಮ್.ರಾಜೇಶ, ಹವಾಲ್ದಾರ ಲಕ್ಷ್ಮಣ, ಹವಾಲ್ದಾರ ಸಂದೀಪ,
ಹವಾಲ್ದಾರ ಸಾಯೋಜ, ಶಂಕರ ಬಡಿಗೇರ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಮಾಜಿ ಸೈನಿಕರ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
undefined
ಡಾ. ರಾಜೇಂದ್ರ. ಟಿ. ಎಲ್.ತಲ್ಲೂರು ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯ ಪ್ರಮಾಣ ಪತ್ರ ವಿತರಣೆ
ಮಲ್ಲಯ್ಯ ಅಜ್ಜ ದೇವರ ನೂತನ ಸರಪಳಿ ಕಟ್ಟೆಯ ಸರಪಳಿ ಹರಿಯುವ ಕಲ್ಲು, ಪ್ರತಿಷ್ಠಾಪನೆ ಕಾರ್ಯಕ್ರಮ
ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ 'ನುಡಿ ತೆರಿಗೆ ನೂರೊಂದು ಕಾರ್ಯಕ್ರಮ' - ಶಿರಿಷ ಜೋಶಿಯವರ ಬಹುಮುಖ ಸಾಹಿತ್ಯಕ ಸೇವೆ ಶ್ಲಾಘನೀಯ.- ಡಾ. ಗುರುದೇವಿ ಹುಲ್ಲೆಪ್ಪನವರ ಮಠ